ಆಸೆಗೊಬ್ಬ ಮೀಸೆಗೊಬ್ಬ - ಇದು 1990ರಲ್ಲಿ ತೆರೆಕಂಡ ಕನ್ನಡ ಹಾಸ್ಯಮಯ ಚಿತ್ರವಾಗಿದೆ. ಇದನ್ನು ಎಂ.ಎಸ್.ರಾಜಶೇಖರ್ ಅವರು ನಿರ್ದೇಶಿಸಿದರು.ಈ ಚಿತ್ರದಲ್ಲಿ ಶಿವರಾಜ್ ಕುಮಾರ್, ಲೋಕೇಶ್ ಮತ್ತು ಸುಧಾರಾಣಿ ಪ್ರಮುಖ ಪಾತ್ರದಲ್ಲಿದ್ದಾರೆ ರಾಘವೇಂದ್ರ ರಾಜಕುಮಾರ್ ಅವರು ಒಂದು ಕಿರು ಪಾತ್ರದಲ್ಲಿದ್ದಾರೆ. ಅಂಬರೀಶ್ ಮತ್ತು ಕೆ ಎಸ್ ಅಶ್ವಥ್ ಅತಿಥಿ ಪಾತ್ರಗಳಲ್ಲಿ ಇದ್ದಾರೆ. ಚಿತ್ರದ ಗೀತೆಗಳನ್ನು ಉಪೇಂದ್ರಕುಮಾರ್ ಸಂಯೋಜಿಸಿದ್ದಾರೆ. ಈ ಚಿತ್ರವು ಅಮೋಲ್ ಪಾಲೇಕರ್ ಅಭಿನಯದ 1979 ರ ಹಿಂದಿ ಚಲನಚಿತ್ರ ಗೋಲ್ಮಾಲ್ ದ ರೀಮೇಕ್ ಆಗಿದೆ. ಶ್ರುತಿ ಅವರು ಈ ಚಿತ್ರದಲ್ಲಿ ಶಿವರಾಜಕುಮಾರ್ ಅವರ ಸೋದರಿಯಾಗಿ ಅಭಿನಯಿಸುವುದರ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟರು. ( ಅವರ ಹೆಸರನ್ನು ಈ ಚಿತ್ರದಲ್ಲಿ ಪ್ರಿಯದರ್ಶಿನಿ ಎಂದು ತೋರಿಸಲಾಗಿದೆ. == ಪಾತ್ರವರ್ಗ == ರಾಮಪ್ರಸಾದ್ ಮತ್ತು ಲಕ್ಷ್ಮಣ ಪ್ರಸಾದ್ ಆಗಿ ಶಿವರಾಜಕುಮಾರ್ ಭವಾನಿಶಂಕರ್ ಆಗಿ ಲೋಕೇಶ್ ಊರ್ಮಿಳಾ ಆಗಿ ಸುಧಾರಾಣಿ ರಾಮಪ್ರಸಾದನ ಸೋದರಿ ಆಗಿ ಶ್ರುತಿ ವೈಶಾಲಿ ಕಾಸರವಳ್ಳಿ ಜಿ. ವಿ. ಶಿವಾನಂದ್ ಮೈಸೂರು ಲೋಕೇಶ್ ಹೊನ್ನವಳ್ಳಿ ಕೃಷ್ಣ ಮಂದೀಪ್ ರಾಯ್ ಚಿತ್ರಾ ಶೆಣೈ ನಾಗೇಶ್ ಮಯ್ಯ ನವೀನ್ ಕುಣಿಗಲ್ ರಾಮನಾಥ್ ರಾಘವೇಂದ್ರ ರಾಜಕುಮಾರ್ ಒಂದು ಕಿರು ಪಾತ್ರದಲ್ಲಿ ಅಂಬರೀಶ್ ಆಗಿಯೇ ಅತಿಥಿನಟರಾಗಿ ಅಂಬರೀಶ್ ಪೋಲಿಸ್ ಇನ್ಸ್ಪೆಕ್ಟರ್ ಪಾತ್ರದಲ್ಲಿ ಅತಿಥಿ ನಟರಾಗಿ ಕೆ. ಎಸ್. ಅಶ್ವಥ್ == ಹಿನ್ನೆಲೆಸಂಗೀತ == ಉಪೇಂದ್ರಕುಮಾರ್ ಎಲ್ಲ ಹಾಡುಗಳನ್ನು ರಚಿಸಿದ್ದಾರೆ.